ಅಭಿಪ್ರಾಯ / ಸಲಹೆಗಳು

ಉಗಮ ಮತ್ತು ಉದ್ದೇಶ

ಉಗಮ ಮತ್ತು ಉದ್ದೇಶ

ಉಗಮ

ಕರ್ನಾಟಕ ರಾಜ್ಯವು ವಿತ್ತೀಯ ಹೊಣೆಗಾರಿಕೆ ಕಾಯ್ದೆ ಯನ್ನು ಜಾರಿಗೊಳಿಸಿದ ಭಾರತದ ಮೊಟ್ಟಮೊದಲ (2002 ರಲ್ಲಿ) ರಾಜ್ಯವಾಗಿದೆ. ಭಾರತದ ವಿತ್ತೀಯ ಸುಧಾರಣಾ ಯೋಜನೆ-ಯುಎಸ್‍ಎಐಡಿ ಯಲ್ಲಿ ಪಡೆದ ಅನುಭವದ ಹಿನ್ನಲೆಯಲ್ಲಿ, ರಾಜ್ಯವು ವಿತ್ತೀಯ ಕಾರ್ಯನೀತಿ ಸಂಸ್ಥೆಯ ಅಗತ್ಯತೆಯನ್ನು ಮನಗಂಡಿತು. ಭಾರತ ಸರ್ಕಾರದಿಂದ ಆರಂಭಿಕ ಯೋಜನಾ ಅನುದಾನವನ್ನು ಪಡೆದು 2007 ರಲ್ಲಿ ಕರ್ನಾಟಕ ಸರ್ಕಾರ ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರ ಈ ಕಾಯ್ದೆಯನ್ನು ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು. ಅದರಂತೆ ಪ್ರಾರಂಭವಾದ ವಿತ್ತೀಯ ಕಾರ್ಯನೀತಿ ಸಂಸ್ಥೆ ಕರ್ನಾಟಕ ಸರ್ಕಾರಕ್ಕೆ ಈ ಕೆಳಕಂಡ ವಿಷಯಗಳಲ್ಲಿ ತನ್ನ ಸಹಾಯವನ್ನು ನೀಡಲಿದೆ:

  • ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ನಿರ್ಣಯಗಳನ್ನು ಕೈಗೊಳ್ಳಲು ಮಾಹಿತಿಯ ಲಭ್ಯತೆಯನ್ನು ಹೆಚ್ಚಿಸುವುದು.
  • ನಿರ್ಣಯಗಳನ್ನು ಕೈಗೊಳ್ಳುವ ಪ್ರಕ್ರಿಯೆಯು ಏಕರೂಪ ಮತ್ತು ಪಾರದರ್ಶಕ ತತ್ವವನ್ನು ಪಾಲಿಸಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಆರ್ಥಿಕ ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುವುದು.
  • ಸಂಬಂಧಪಟ್ಟ ಸಂಸ್ಥೆಗಳ ಸಾಮಥ್ರ್ಯವನ್ನು ನಿರಂತರವಾಗಿ ಉನ್ನತೀಕರಿಸಲು ವಿತ್ತೀಯ ಸುಧಾರಣಾ ಪಥವನ್ನು ಸುಸ್ಥಿರಗೊಳಿಸುವುದು

 

ಉದ್ದೇಶ

 

      ವಿ.ಕಾ.ಸಂ. ಯ ಪ್ರಮುಖ ಉದ್ದೇಶಗಳೆಂದರೆ:

  • ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳ/ಸಿಬ್ಬಂದಿ ವರ್ಗದ ಅಗತ್ಯಕ್ಕೆ ಅನುಗುಣವಾಗಿ ವಿತ್ತೀಯ ವಿಷಯಗಳಲ್ಲಿ ತರಬೇತಿ ನೀಡುವುದು ಮತ್ತು ವಿತ್ತೀಯ ವಿವೇಚನೆ ಕುರಿತು ಒತ್ತು ನೀಡುವುದರೊಂದಿಗೆ ಹಣಕಾಸು ಯೋಜನೆ, ಕಾರ್ಯಕ್ರಮ ಅನುಷ್ಠಾನ, ಸಾರ್ವಜನಿಕ ವೆಚ್ಚ ಹಾಗೂ ಸ್ವತ್ತು ನಿರ್ವಹಣೆಯ ವಿವಿಧ ಅಂಶಗಳ ಬಗ್ಗೆ ಸಮರ್ಪಕವಾದ ಸಂಶೋಧನಾ ವರದಿ ತಯಾರಿಸುವುದು.
  • ಬೇಡಿಕೆಗೆ ಅನುಗುಣವಾಗಿ, ಮತ್ತು ಸ್ವ ಇಚ್ಛೆಯಿಂದ ಸರ್ಕಾರಕ್ಕೆ ಮತ್ತು ಇತರ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಸಂಬಂಧಿಸಿದ ಜರೂರಾದ ಮತ್ತು ದೀರ್ಘಕಾಲ ಪ್ರಸ್ತುತವಾದ ವಿಶೇಷ ಸಂಶೋಧನೆ ಮತ್ತು ಅಧ್ಯಯನವನ್ನು ಕೈಗೊಳ್ಳುವುದು.
  • ಕಾರ್ಯನೀತಿ ವಿಶ್ಲೇಷಣೆ, ಹೂಡಿಕೆಯ ಮೌಲ್ಯಮಾಪನ, ಸಂಭವನೀಯ ಅಪಾಯ ನಿರ್ಧಾರಣೆ ಮತ್ತು ಸಾಧನೆಯ ಮೇಲ್ವಿಚಾರಣೆಯ ವಿಧಾನಗಳಿಗೆ ಉಪಯೋಗ ಸ್ನೇಹಿ ಆಕರ ಕೈಪಿಡಿಗಳು, ನಮೂನೆಗಳು, ಸಾಧನ-ಸಲಕರಣೆಗಳು ಮತ್ತು ಮಾನದಂಡಗಳನ್ನು ತಯಾರಿಸುವುದು ಹಾಗೂ ಅವುಗಳನ್ನು ಸಾಂಸ್ಥೀಕರಿಸುವುದು.
  • ಸರ್ಕಾರದ ಕಾರ್ಯಚರಣೆಗಳಲ್ಲಿ ಉತ್ತಮ ಆರ್ಥಿಕ ಆಡಳಿತಕ್ಕೆ ಸಂಬಂಧಿಸಿದ ಅತ್ಯುತ್ತಮ ಆಚರಣೆಗಳನ್ನು ಗ್ರಹಿಸಿ, ದಾಖಲಿಸಿ ಪ್ರಚುರ ಪಡಿಸುವುದು ಮತ್ತು ವೆಚ್ಚಮಾಡಿದ ಹಣದ ಮೌಲ್ಯವನ್ನು ಖಾತ್ರಿಪಡಿಸಲು ಇಲಾಖೆಗೆ ನೆರವಾಗುವುದು.
  • ತರಬೇತಿ ಮತ್ತು ಸಂಶೋಧನೆಯನ್ನು ಸಮರ್ಥವಾಗಿ ನಿರ್ವಹಿಸಲು ಅಗತ್ಯವಿರುವ ಭೌತಿಕ ಮೂಲಸೌಕರ್ಯಗಳು ಮತ್ತು ನಿರ್ವಹಣಾ ಸಂಪನ್ಮೂಲಗಳನ್ನು ನಿರಂತರವಾಗಿ ಒದಗಿಸುವುದು ಮತ್ತು ನಿರ್ವಹಿಸುವುದು.

 

ಇತ್ತೀಚಿನ ನವೀಕರಣ​ : 18-09-2021 03:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080