ವಿಕಾಸಂ ಚಿಹ್ನೆ

 

ವಿಕಾಸಂನ ಲಾಂಛನ ಕುರಿತು

FPI Logo

ವಿತ್ತೀಯ ಕಾರ್ಯನೀತಿ ಸಂಸ್ಥೆಯು ವಿಶೇಷವಾದ ಜ್ಞಾನ ಕೇಂದ್ರವಾಗಿದ್ದು ವಿತ್ತೀಯ ವಿಷಯಗಳನ್ನು ಹೆಚ್ಚು ಹೆಚ್ಚಾಗಿ ಅರ್ಥೈಸಿಕೊಳ್ಳಲು ಮತ್ತು ಸಾರ್ವಜನಿಕ ಸೇವೆಗಳು ತಲುಪುವ ಪರಿಣಾಮಕಾರಿತ್ವವನ್ನು ವೃದ್ಧಿಸುವ ಕಾರ್ಯ ಮಾಡುತ್ತಿದೆ. ಸ್ಥಳೀಯ ಸಂಸ್ಥೆಗಳನ್ನು ಒಳಗೊಂಡಂತೆ ರಾಜ್ಯ ಮತ್ತು ಇತರೆ ರಾಜ್ಯದ ಇಲಾಖೆಗಳ ವಿತ್ತೀಯ ನಿರ್ವಹಣೆಯ ನೀತಿ ನಿರೂಪಣೆ ಮತ್ತು ಕಾರ್ಯಾಚರಣೆಯ ಕ್ಷೇತ್ರಗಳೆರಡರಲ್ಲೂ ವಿಶಿಷ್ಟವಾದ ಮತ್ತು ಶಾಶ್ವತವಾದ ಕೊಡುಗೆಯನ್ನು ನೀಡುವ ಮಹತ್ವಾಕಾಂಕ್ಷೆಯ ದೃಷ್ಟಿಕೋನದೊಂದಿಗೆ ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಹೊಂದಾಣಿಕೆಯಾಗುವ ಜ್ಞಾನ, ಪರಿಣಿತಿ, ಅನುಭವ, ಕಾರ್ಯಚರಣೆಯ ಕೌಶಲ್ಯ ಮತ್ತು ಸರಿಹೊಂದುವ ವ್ಯವಸ್ಥೆಯನ್ನು ಅಳವಡಿಸಿಕೊಂಡು ಅದನ್ನು ಪ್ರಚುರ ಪಡಿಸುವ ಸಾಮಥ್ರ್ಯ ಹೊಂದಿರುವ ಮಾನವ ಸಂಪನ್ಮೂಲವನ್ನು ಹೊಂದುವುದು ಸಂಸ್ಥೆಯ ಆತಂರಿಕ ಉದ್ದೇಶ.

ಸಂಸ್ಥೆಯ ಲಾಂಛನವು ಸರಳ ಹಾಗೂ ವಿಶಿಷ್ಟ ಭಾರತೀಯ ತತ್ವಗಳನ್ನು ಒಳಗೊಂಡ ಕಲಾತ್ಮಕ ವಿನ್ಯಾಸವನ್ನು ಹೊಂದಿದ್ದು, ಸಂಸ್ಥೆಯ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಅದರ ಜೊತೆಗೆ ಲಾಂಛನವು ಸಂಸ್ಥೆ ಮತ್ತು ಅದರ ಸಿಬ್ಬಂದಿಗಳಿಗೆ ವಿತ್ತೀಯ ಹೊಣೆಗಾರಿಕೆಯೆಡೆಗೆ ತಮ್ಮ ಸರ್ವ ಪ್ರಯತ್ನವನ್ನು ಕೇಂದ್ರೀಕರಿಸಲು ನೆನಪಿಸುತ್ತದೆ.

ಲಾಂಛನದ ವಿವಿಧ ಆಯಾಮಗಳ ಸಂಕ್ಷೀಪ್ತ ವಿವರಣೆ :

  1. ಲಾಂಛನದ ವಿನ್ಯಾಸವು ಸಿಂಧೂ ನಾಗರೀಕತೆಯ ಸಮಯದಲ್ಲಿ ಬಳಸುತ್ತಿದ್ದ ಟೆರ್ರಕೋಟಾ ಮುದ್ರೆಗಳ ಸಾಂಕೇತಿಕ ಪ್ರತಿನಿಧಿತ್ವ ಹೊಂದಿದೆ.
  2. ಲಾಂಛನದಲ್ಲಿರುವ ತಾಮ್ರ ಮತ್ತು ಚಿನ್ನಮಿಶ್ರಿತ ಹಳದಿ ಬಣ್ಣ ಪ್ರಾಚೀನ ಭಾರತದ ನಾಣ್ಯಯುಗವನ್ನು ಪ್ರತಿನಿಧಿಸುತ್ತದೆ
  3. 17 ‘ಎಫ್’ ಗಳು , ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯ್ದೆ, 2002ರ 4(1)ನೇ ಪ್ರಕರಣದಲ್ಲಿರುವ 17 ವಿತ್ತೀಯ ನಿರ್ವಹಣಾ ತತ್ವಗಳನ್ನು ಪ್ರತಿನಿಧಿಸುತ್ತವೆ
  4. ಲಾಂಛನದ ಪರಿಕಲ್ಪನೆಯೇ ನಿರಂತರ ಚಲನೆ ಮತ್ತು ತನ್ನೊಳಗಿನ ಸ್ಥಿರತೆಯನ್ನು ಬಿಂಬಿಸುತ್ತದೆ.

ಇತ್ತೀಚಿನ ನವೀಕರಣ​ : 14-05-2020 04:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ