ಅಭಿಪ್ರಾಯ / ಸಲಹೆಗಳು

ವಿಕಾಸಂ- ಆವರಣ ಸೌಲಭ್ಯಗಳು

ಸಂಸ್ಥೆಯ ಆವರಣದಲ್ಲಿನ ಮೂಲಸೌಕರ್ಯಗಳು

ವಿಕಾಸಂ ಆವರಣ

ವಿಕಾಸಂ 5.30 ಎಕರೆ ವಿಸ್ತೀರ್ಣದಲ್ಲಿದ್ದು, ಬೆಂಗಳೂರಿನ ದಕ್ಷಿಣ ಭಾಗದ ಬೆಂಗಳೂರು ಮೈಸೂರು ರಸ್ತೆ, ಕೆಂಗೇರಿಯಲ್ಲಿದೆ. ನಗರದ ಮುಖ್ಯ ಬಸ್ ನಿಲ್ದಾಣ (ಮೆಜೆಸ್ಟಿಕ್)ದಿಂದ ಸುಮಾರು 15 ಕಿ.ಮೀ. ದೂರದಲ್ಲಿದೆ. ವಿಕಾಸಂ ಕಲಿಕೆ ಮತ್ತು ವಸತಿ ಸೌಕರ್ಯಗಳನ್ನು ಒಳಗೊಂಡಿರುವ 7 ಕಟ್ಟಡಗಳನ್ನು ಹೊಂದಿದೆ.

   

ಸಂಸ್ಥೆ ಹೊಂದಿರುವ ಕಲಿಕಾ ಸೌಲಭ್ಯಗಳು;

 

ಚರ್ಚಾ ಕೊಠಡಿಗಳು

ಕಲಿಕಾರ್ಥಿಗಳಿಗೆ ಸಹಭಾಗಿತ್ವದ ಕಲಿಕೆ ಮತ್ತು ಜ್ಞಾನ ವಿನಿಮಯಕ್ಕೆ  ಅನುಕೂಲವಾಗುವ,ಸರಾಸರಿ 30 ಕಲಿಕಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿರುವ, ಕಲಿಕಾ ಪರಿಸರವನ್ನು ಸೃಷ್ಟಿಸುವ ರೀತಿಯಲ್ಲಿ ಎಲ್ಲಾ 7 ಚರ್ಚಾ ಕೊಠಡಿಗಳನ್ನು ವಿನ್ಯಾಸಗೊಳಿಸಿದ್ದು, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ, ಆಸನ ವ್ಯವಸ್ಥೆ, ಲ್ಯಾನ್, ಎಲ್‍ಸಿಡಿ ಪ್ರೊಜೆಕ್ಟರ್ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.

 

ಗ್ರಂಥಾಲಯ

ಗ್ರಂಥಾಲಯವು ಸಾಂಪ್ರದಾಯಿಕ ಮತ್ತು ಡಿಜಿಟಲ್ ವ್ಯವಸ್ಥೆ ಎರಡನ್ನೂ ಒಳಗೊಂಡ ವಿಶಿಷ್ಟವಾದ ಜ್ಞಾನ ಕೇಂದ್ರವಾಗಿದೆ. ಚರ್ಚಾಕೊಠಡಿ, ವಸತಿನಿಲಯ ಮತ್ತು ಅತಿಥಿಗೃಹದಲ್ಲಿರುವ ಲ್ಯಾನ್ ವ್ಯವಸ್ಥೆಯಿಂದಾಗಿ ದಿನದ ಎಲ್ಲಾ ಸಮಯದಲ್ಲೂ ಡಿಜಿಟಲ್ ಗ್ರಂಥಾಲಯದ ಸೌಲಭ್ಯವನ್ನು  ಪಡೆಯಬಹುದಾಗಿದೆ.

 

ಅಂತರ್ಜಾಲ ಸೌಲಭ್ಯ

ದಿನದ 24 ಗಂಟೆಗಳ ಕಾಲ ಲಭ್ಯವಿರುವ ಅಂರ್ತಜಾಲ ವ್ಯವಸ್ಥೆ, ಕೆಎಸ್‍ಡಬ್ಲ್ಯೂಎಎನ್ ಮೂಲಕ ಆಂತರಿಕ ಮತ್ತು ಅಂತರ್ ಸಂಸ್ಥೆ ಜಾಲಗಳನ್ನು ಸಂಪರ್ಕಿಸುವ ಸಾಮಥ್ರ್ಯ ಮತ್ತು ಇತರೆ ಕಂಪ್ಯೂಟರ್ ಉಪಕರಣಗಳು hands on ತರಬೇತಿಗೆ ಸಹಾಯಕವಾಗಿದೆ.

 

ಸಮ್ಮೇಳನ ಕೊಠಡಿ ಮತ್ತು ಸಭಾಂಗಣ

 ಸುಮಾರು 40 ಜನರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುವ ತಲಾ ಎರಡು ಸಮ್ಮೇಳನ ಕೊಠಡಿಗಳಿವೆ ಮತ್ತು 180 ಆಸನಗಳ ವ್ಯವಸ್ಥೆ ಇರುವ ಒಂದು ಸಭಾಂಗಣವಿದ್ದು ವೇದಿಕೆಯ ಮೇಲೆ 10 ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ .

 

ಅತಿಥಿ ಗೃಹ

ಅತಿಥಿ ಗೃಹದಲ್ಲಿ ಒಟ್ಟು ಹನ್ನೆರಡು ಕೊಠಡಿಗಳಿವೆ. ಅಲ್ಲದೆ ಸಾಮಾನ್ಯ ಊಟದ ಕೋಣೆಯ ಸೌಲಭ್ಯ ಹೊಂದಿರುವ ಎರಡು ಹಾಸಿಗೆಗಳುಳ್ಳ ಒಂಬತ್ತು ಕೋಣೆಗಳು  ಇರುತ್ತವೆ.

 

ವಸತಿನಿಲಯ

ಕಲಿಕಾರ್ಥಿಗಳಿಗೆ ವಸತಿ ಸೌಕರ್ಯ ಕಲ್ಪಿಸುವ ಸಲುವಾಗಿ ವಿಕಾಸಂನಲ್ಲಿ ಎರಡು ಹಾಸಿಗೆಯ ಕೊಠಡಿಗಳನ್ನು ಹೊಂದಿರುವ ವಸತಿನಿಲಯದ ವ್ಯವಸ್ಥೆ ಇದೆ. ಈ ವಸತಿನಿಲಯವು ಸಾಮಾನ್ಯ  ಊಟದ ಕೋಣೆ ಸೌಲಭ್ಯವನ್ನು ಒಳಗೊಂಡಿದೆ.

ಇತ್ತೀಚಿನ ನವೀಕರಣ​ : 20-03-2021 11:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080