ಅಭಿಪ್ರಾಯ / ಸಲಹೆಗಳು

ನಿರ್ದೇಶಕರ ಕಕ್ಷೆಯಿಂದ

 

ನಿರ್ದೇಶಕರ ಸಂದೇಶ

 

ಸುಜಿತ್ ಕುಮಾರ್ ಚೌಧುರಿ , ಐಪಿಒಎಸ್:1991

ಅಧಿಕಾರ ಸ್ವೀಕರಿಸಿದ ದಿನಾಂಕ: 27ನೇ ಮಾರ್ಚ್ 2018

 

 

ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ) ಯ ನಿರ್ದೇಶಕನಾಗಿ ಸೇವೆ ಸಲ್ಲಿಸಲು ನನಗೆ ನೀಡಲಾದ ಅವಕಾಶವು ಒಬ್ಬ ಸಾರ್ವಜನಿಕ ಅಧಿಕಾರಿಗೆ ತನ್ನ ವೃತ್ತಿಜೀವನದಲ್ಲಿ ಸಿಗಬಹುದಾದ ಅಪರೂಪದ ಸೌಭಾಗ್ಯ ಎಂದು ಭಾವಿಸುತ್ತೇನೆ. 'ವಿಕಾಸಂ' ಅಸ್ತಿತ್ವಕ್ಕೆ ಬಂದು ಅತ್ಯಂತ ಕ್ಲುಪ್ತ ಸಮಯದಲ್ಲಿ ಕರ್ನಾಟಕ ರಾಜ್ಯದೊಳಗೆ ಮತ್ತು ಹೊರರಾಜ್ಯಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ಈ ಸಂಸ್ಥೆಯು ಸಮಾಜದ ಬೌದ್ಧಿಕವಲಯದ ಪರಿಣಿತರು ಹಾಗೂ ಸರ್ಕಾರ ಅದರಲ್ಲೂ ಪ್ರಮುಖವಾಗಿ ಹಣಕಾಸು ಇಲಾಖೆ ಇವುಗಳ ನಡುವಿನ ಮುಖಾಮುಖಿಗಾಗಿ ಇರುವ ಒಂದು ವೇದಿಕೆಯಾಗಿದೆ. ವಿತ್ತೀಯ ಕಾರ್ಯನೀತಿ ಹಾಗೂ ಅವಶ್ಯಕ ಸುಧಾರಣಾ ಕ್ರಮಗಳೂ ಸೇರಿದಂತೆ ಆಯವ್ಯಯ ವರದಿ ರೂಪಿಸುವಲ್ಲಿ ಮೌಲ್ಯಯುತವಾದ ಕೊಡುಗೆಗಳನ್ನು ನೀಡುವುದರಲ್ಲಿ 'ವಿಕಾಸಂ' ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಜೊತೆಗೆ ಪರಿಣಾಮಕಾರಿ ಆಡಳಿತ ಹಾಗೂ ಸೇವೆಗಳ ದಕ್ಷ ಪೂರೈಕೆಗೆ ಅವಶ್ಯಕವಾದ ಬಲಸಂವರ್ಧನೆಗಾಗಿ ತರಬೇತಿ ನೀಡಬೇಕಾದ ಜವಾಬ್ದಾರಿಯನ್ನು ವಿಧಿಸಲಾಗಿದೆ. ಇಂತಹ ಜವಾಬ್ದಾರಿಯುತ ಸಂಸ್ಥೆಯನ್ನು ಮುನ್ನಡೆಸುವುದು ಗುರುತರ ಹೊಣೆಗಾರಿಕೆಯ ಹಾಗೂ ಸವಾಲಿನ ಕಾರ್ಯವಾಗಿದೆ. ತಮ್ಮೆಲ್ಲರ ಸಂಪೂರ್ಣ ಬೆಂಬಲದಿಂದ 'ವಿಕಾಸಂ' ಎಲ್ಲಾ ಭಾಗೀದಾರರ ನಿರೀಕ್ಷೆಗಳನ್ನು ಈಡೇರಿಸುತ್ತದೆಂದು ಆಶಿಸುತ್ತೇನೆ.

ವಿತ್ತೀಯ ಕಾರ್ಯನಿರ್ವಹಣೆಯು ಆಡಳಿತ ನಿರ್ವಹಣೆಯ ಮೂಲ ತಿರುಳು ಹಾಗೂ ಆರ್ಥಿಕ ಬೆಳವಣಿಗೆಯ ಮುನ್ಸೂಚಕವಾಗಿದೆ. ಇದೊಂದು ಬಹು-ಮುಖಿ ಕಾರ್ಯಕ್ಷೇತ್ರವಾಗಿದ್ದು, ಇದು ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾರ್ವಜನಿಕ ಹಣಕಾಸಿನ ಇತರೆ ಕ್ಷೇತ್ರಗಳಾದ ಸಂಪನ್ಮೂಲ ಸಂಗ್ರಹಣೆ, ದೂರದೃಷ್ಠಿಯುಳ್ಳ ಸಮರ್ಪಕ ತೆರಿಗೆ-ಪದ್ಧತಿ, ನಿರ್ದಿಷ್ಟ ಸಮಯಾಧಾರಿತ ಗುರಿಹೊಂದಿದ ಆಯವ್ಯಯ ನಿರ್ಣಯಗಳು, ವಿತ್ತೀಯ ಸಮತೋಲನ, ಸಾರ್ವಜನಿಕ ಹಣಕಾಸು ಸಾಂಸ್ಥಿಕ ಚೌಕಟ್ಟು, ಉತ್ತರದಾಯಿತ್ವ ಮತ್ತು ಲೆಕ್ಕ ಪರಿಶೋಧನಾ ವ್ಯವಸ್ಥೆ , ಇ-ಆಡಳಿತ, ವೆಚ್ಚಗಳ ಸಮರ್ಥ ನಿರ್ವಹಣೆ ಮುಂತಾದ ಹಲವಾರು ಕ್ಷೇತ್ರಗಳನ್ನು ಇದು ಒಳಗೊಂಡಿದೆ. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವ ಸಮುದಾಯಗಳ ಅವಶ್ಯಕತೆಗಳ ಕುರಿತು ವಿಶೇಷ ಗಮನ ನೀಡುವುದೂ ಇದರ ವ್ಯಾಪ್ತಿಯಲ್ಲಿ ಬರುತ್ತದೆ..

ವಿತ್ತೀಯ ಕಾರ್ಯನಿರ್ವಹಣೆಗಾಗಿ 2002ನೇ ವರ್ಷದಲ್ಲಿ ' ವಿತ್ತೀಯ ಹೊಣೆಗಾರಿಕೆ ಕಾಯ್ದೆ' ಯನ್ನು ರಚಿಸಿ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿರುತ್ತದೆ. ವಿತ್ತೀಯ ಕಾರ್ಯನೀತಿ ವಿಶ್ಲೇಷಣಾ 'ಕೋಶ' (FPAC) ಮತ್ತು ತದನಂತರ 'ವಿಕಾಸಂ' ಸ್ಥಾಪನೆ ಹಾಗೂ ಇವೆರಡು ಘಟಕಗಳನ್ನು 'ವಿಕಾಸಂ' ನಲ್ಲಿ ವಿಲೀನಗೊಳಿಸಿರುವುದು, ಈ ಕಾಯ್ದೆಯ ಆಶೋತ್ತರಗಳನ್ನು ಸಾಂಸ್ಥೀಕರಿಸುವ ಕರ್ನಾಟಕ ಸರ್ಕಾರದ ಪ್ರಾಮಾಣಿಕ ಕಳಕಳಿಯನ್ನು ಹಾಗೂ ಪ್ರಯತ್ನಗಳನ್ನು ಪ್ರತಿಫಲಿಸುತ್ತದೆ. ' ವಿಕಾಸಂ' ನ ದೂರದೃಷ್ಠಿ ಹಾಗೂ ಗುರಿಗಳ ಘೋಷಣೆಗಳು ಈ ಕಾಯ್ದೆಯನ್ನು ಜಾರಿಗೆ ತರುವ ನಿರ್ದಿಷ್ಟ ಕಾರ್ಯ-ನುಡಿಗಳಾಗಿವೆ. ಹಣಕಾಸು ಇಲಾಖೆಯಡಿ ಒಂದು ನಿರ್ದೇಶನಾಲಯವಾಗಿ ಅಸ್ತಿತ್ವಕ್ಕೆ ಬಂದ ದಿನದಿಂದಲೂ ' ವಿಕಾಸಂ' ತನ್ನ ಕಾರ್ಯಗಳನ್ನು ಹಾಗೂ ಜವಾಬ್ದಾರಿಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ. ಅವಶ್ಯಕ ನಿಪುಣತೆಗಳೊಂದಿಗೆ ಕೇಂದ್ರೀಕೃತ ದೃಷ್ಠಿಯುಳ್ಳ ಸಂಶೋಧನೆ ಮತ್ತು ತರಬೇತಿಗಳನ್ನು ನಡೆಸಲು ನಿರ್ದಿಷ್ಟ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಹಿಳಾ ಉದ್ದೇಶಿತ ಆಯವ್ಯಯ ಮಂಡನೆಯಲ್ಲಿ ಕರ್ನಾಟಕವು ಗಮನಾರ್ಹ ಸಾಧನೆ ಮಾಡಿದ್ದು, ಇದಕ್ಕಾಗಿ ಕರ್ನಾಟಕವನ್ನು ಪ್ರಾಯೋಗಿಕ ರಾಜ್ಯವನ್ನಾಗಿ ಆಯ್ಕೆಮಾಡಲಾಗಿದೆ. ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಉದ್ದೇಶಿತ ಆಯವ್ಯಯವನ್ನು ಮತ್ತಷ್ಟು ಉತ್ಕೃಷ್ಟಗೊಳಿಸಲಾಗಿದ್ದು, 'ವಿಕಾಸಂ' ಈಗ ಮಹಿಳಾ ಉದ್ದೇಶಿತ ಲೆಕ್ಕಪರಿಶೋಧನೆ ಕೈಗೊಳ್ಳುವಷ್ಟು ಪ್ರಗತಿಸಾಧಿಸಿದೆ. 'ವಿಕಾಸಂ' ತನ್ನ ಈ ಪಯಣದಲ್ಲಿ ಹಲವಾರು ಇಲಾಖೆಗಳು, ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಕೈಜೋಡಿಸಿ ಸಹಯೋಗ ಸಾಧಿಸಿದೆ. ಈ ಸಂಗಮ ಮತ್ತು ಸಂಯೋಗಗಳು ಈ ಸಂಸ್ಥೆಯ ಬೆಳವಣಿಗೆ ಮತ್ತು ಸಾಮರ್ಥ್ಯವರ್ಧನೆಯಲ್ಲಿ ಅಸಾಧಾರಣ ಕೊಡುಗೆ ನೀಡಿವೆ. ಇತ್ತೀಚೆಗೆ ರಾಷ್ಟ್ರೀಯ ಸಾರ್ವಜನಿಕ ಹಣಕಾಸು ಮತ್ತು ಕಾರ್ಯನೀತಿ ಸಂಸ್ಥೆ, ದೆಹಲಿಯ ಜೊತೆಗೆ 'ವಿಕಾಸಂ' ಪರಸ್ಪರ ಸಹಯೋಗ ಮತ್ತು ಸಹಾಯಕ್ಕಾಗಿ, ಒಂದು ತಿಳುವಳಿಕಾ ಒಪ್ಪಂದ ಮಾಡಿಕೊಂಡಿದೆ. ಇದು ನಿಶ್ಚಿತವಾಗಿ 'ವಿಕಾಸಂ' ನ ಶೈಕ್ಷಣಿಕ ಮತ್ತು ತರಬೇತಿ ಸಾಮರ್ಥ್ಯಗಳನ್ನು ವರ್ಧಿಸುತ್ತದೆ. ಮುಂದಿನ ಪಯಣದಲ್ಲಿ ಎಲ್ಲಾ ಪಾಲುದಾರರ ಮತ್ತು ಭಾಗೀದಾರರ ಸಕ್ರಿಯ ಸಂವಾದ ಹಾಗೂ ಪಾಲ್ಗೊಳ್ಳುವಿಕೆಗಳನ್ನು ಉತ್ತೇಜಿಸಿ 'ವಿಕಾಸಂ' ನ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಕಾರ್ಯವ್ಯವಸ್ಥೆಯನ್ನು ಬಲಪಡಿಸುವುದು ನನ್ನ ಪಾತ್ರವಾಗಿರುತ್ತದೆ ಎಂದು ಪರಿಗಣಿಸಿದ್ದೇನೆ.

'ವಿಕಾಸಂ' ನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಲು ನಾನು ನಿಮ್ಮೆಲ್ಲರ ಬೆಂಬಲವನ್ನು ನಿರೀಕ್ಷಿಸುತ್ತೇನೆ. ಜೊತೆಗೆ 'ವಿಕಾಸಂ' ನ ಕಾರ್ಯಕ್ರಮಗಳನ್ನು ಮತ್ತು ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸಲು ನಿಮ್ಮ ಅಮೂಲ್ಯ ಸಲಹೆಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ಸ್ವಾಗತಿಸುತ್ತೇನೆ.

ಧನ್ಯವಾದಗಳು,

 

ಸುಜಿತ್ ಕುಮಾರ್ ಚೌಧುರಿ
ನಿರ್ದೇಶಕರು

 

ಇತ್ತೀಚಿನ ನವೀಕರಣ​ : 14-06-2022 04:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080