ಅಭಿಪ್ರಾಯ / ಸಲಹೆಗಳು

ವಿಕಾಸಂ ಕುರಿತು

ವಿತ್ತೀಯ ಕಾರ್ಯನೀತಿ ಸಂಸ್ಥೆ    ವಿಕಾಸಂ ಕಿರು ಹೊತ್ತಿಗೆ

 

ವಿಕಾಸಂ ಪರಿಚಯ

 

ವಿತ್ತೀಯ ಕಾರ್ಯನೀತಿ ಸಂಸ್ಥೆ    

ಸರ್ಕಾರವು ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು 2007 ರಲ್ಲಿ ಸ್ಥಾಪಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರವು ವಿತ್ತೀಯ ಹೊಣೆಗಾರಿಕೆ ಕಾಯ್ದೆ, 2002ನ್ನು ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯ ಚಟುವಟಿಕೆಗಳು ಮತ್ತು ಸೇವೆಗಳು, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರ, 4ನೇ ಪ್ರಕರಣದ ಉಪಬಂಧಗಳ ಮೇರೆಗಿನ ವಿತ್ತೀಯ ನಿರ್ವಹಣೆಯ ಹದಿನೇಳು ತತ್ವಗಳ ಆಶಯವನ್ನು ಅಳವಡಿಸಿಕೊಳ್ಳುವುದನ್ನು ಅಪೇಕ್ಷಿ¸ಸುತ್ತದೆ.

 

ಇವುಗಳನ್ನು ಕೆಳಗಿನ ನಾಲ್ಕು ವಿಧಾನಗಳ ಮೂಲಕ ಸಾಧಿಸಲಾಗುವುದು.

i) ಅಗತ್ಯಕ್ಕೆ ತಕ್ಕಂತೆ ತರಬೇತಿ ಮತ್ತು ಹಾಗೆ ತರಬೇತಿ ಪಡೆದುಕೊಂಡವರಿಗೆ ನಿರಂತರವಾಗಿ ನೆರವು ನೀಡುವುದು.

ii) ಸಾಂಪ್ರದಾಯಕ ಕ್ಷೇತ್ರಗಳು ಮತ್ತು ಸಾರ್ವಜನಿಕ -ಖಾಸಗಿ ಸಹಭಾಗಿತ್ವ (PPP), ಸರಕು ಮತ್ತು ಸೇವಾ ತೆರಿಗೆಗಳು(GST),ಪರಿಸರ ಅರ್ಥಶಾಸ್ತ್ರ, ಆರೋಗ್ಯ ಅರ್ಥಶಾಸ್ತ್ರ ಮೊದಲಾದ ನೂತನ ಮತ್ತು ಸವಾಲಿನ ಕ್ಷೇತ್ರಗಳಲ್ಲಿ ಸಮಾಲೋಚನಾ ಸೇವೆ ನೀಡುವುದು ಮತ್ತು ಸಂಶೋಧನೆ ನಡೆಸುವುದು.

iii) ದತ್ತಾಂಶ ಕೋಶ ನಿರ್ವಹಿಸುವುದು ಮತ್ತು ಇಲಾಖೆಗಳಿಗೆ ದತ್ತಾಂಶ ಕೋಶದ ಸೃಜನೆ ಹಾಗೂ ನಿರ್ವಹಣೆಗೆ ನೆರವು ನೀಡುವುದುiv) ವಿತ್ತೀಯ ನಿರ್ವಹಣೆ ತತ್ವಗಳು ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಸಲಹೆ ಮತ್ತು ನೆರವು ನೀಡುವುದು.

iv) ವಿತ್ತೀಯ ನಿರ್ವಹಣೆ ತತ್ವಗಳು ಮತ್ತು ಹೊಣೆಗಾರಿಕೆಗೆ ಸಂಬಂಧಿಸಿದ ಸಲಹೆ ಮತ್ತು ನೆರವು ನೀಡುವುದು.

 

ವಿತ್ತೀಯ ಕಾರ್ಯನೀತಿ ಸಂಸ್ಥೆಯು ಕಲ್ಪಿಸಿದ  5 ಕೇಂದ್ರಗಳು:

  1. ಸಾರ್ವಜನಿಕ ಸಂಪನ್ಮೂಲ ನಿರ್ವಹಣೆ
  2. ಆರ್ಥಿಕ ಹೊಣೆಗಾರಿಕೆ ಮತ್ತು ವಿಕೇಂದ್ರಿಕರಣ
  3. ಯೋಜನಾ ನಿರ್ವಹಣೆ
  4. ಸಾರ್ವಜನಿಕ ವೆಚ್ಚ ನಿರ್ವಹಣೆ
  5. ಯೋಜನೆ, ಮಾಹಿತಿ ತಂತ್ರಜ್ಞಾನ ಮತ್ತು ಸಂಖ್ಯಾಶಾಸ್ತ್ರ

 

ಬೋಧಕವರ್ಗ

      ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಬೋಧಕವರ್ಗವಾಗಿ ತೆಗೆದುಕೊಳ್ಳಲಾಗುತ್ತಿದ್ದು, ಅವರು ಸಮಗ್ರ ಭಾರತದ ದೃಷ್ಟಿಕೋನ, ತಮ್ಮ ಕ್ಷೇತ್ರದ ಸೂಕ್ಷ್ಮ ಕಾರ್ಯಾಚರಣೆಗಳ ಒಳನೋಟವನ್ನು ಪ್ರದರ್ಶಿಸುವ ಸಾಮಥ್ರ್ಯ ಮತ್ತು ಸಾಂಸ್ಥಿಕ ಜ್ಞಾನವನ್ನು ಹೊಂದಿದವರಾಗಿದ್ದು  ಅವರು ಸರ್ಕಾರದ ವ್ಯವಸ್ಥೆಯ ಹೊರಗಿನಿಂದ ತೆಗೆದುಕೊಂಡ ಸಂಶೋಧಕರು ಮತ್ತು ವೃತ್ತಿಪರ ತರಬೇತಿದಾರರುಗಳನ್ನೊಳಗೊಂಡಂತೆ ಪ್ರವಹಿಸುವ ತಂಡಗಳಾಗಿ (fluid teams) ಮಾ‍ರ್ಪಡುತ್ತಾರೆ.. ಈ ತಂಡಗಳು ಶೈಕ್ಷಣಿಕ ಮತ್ತು ವಿಶ್ಲೇಷಣಾತ್ಮಕ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದರೊಂದಿಗೆ ಪರಿಹಾರೋಪಾಯ, ಕಾರ್ಯಕ್ರಮ, ಯೋಜನೆ ಮತ್ತು ನೀತಿಗಳನ್ನು ಆಂತರೀಕರಣಗೊಳಿಸುವಲ್ಲಿ ಬಳಕೆದಾರ ಇಲಾಖೆಗಳು ಮತ್ತು ಇತರೆ ಬಳಕೆದಾರರಿಗೆ ಸಹಾಯ ನೀಡುತ್ತವೆ. ನಿರ್ದೇಶಕರ ನೇತೃತ್ವದಲ್ಲಿ ಬೋಧಕವರ್ಗದವರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಿರ್ದೇಶಕರು ಉತ್ಕೃಷ್ಟವಾದ ಶೈಕ್ಷಣಿಕ ಹಿನ್ನಲೆ ಹೊಂದಿರುವ ವ್ಯಕ್ತಿಯಾಗಿದ್ದು, ಸಮಗ್ರ ಅರ್ಥಶಾಸ್ತ್ರ ಮತ್ತು ವಿತ್ತೀಯ ಸಮಸ್ಯೆಗೆ ಸಂಬಂಧಿಸಿದ ಆಯವ್ಯಯ ನಿರ್ವಹಣೆಯಲ್ಲಿ ವಿಸ್ತೃತ ಅನುಭವ ಉಳ್ಳವರಾಗಿರುತ್ತಾರೆ.

       ವಿಕಾಸಂನಲ್ಲಿ ಒಟ್ಟು 15 ಬೋಧಕ ವರ್ಗದ ಹುದ್ದೆಗಳಿವೆ. ಈ ಎಲ್ಲಾ ಹುದ್ದೆಗಳನ್ನು ನಿಯೋಜನೆ ಅಥವಾ ಗುತ್ತಿಗೆ ಆಧಾರದಲ್ಲಿ ತುಂಬಲಾಗುತ್ತದೆ. ಈ ಬೋಧಕ ವರ್ಗದ ಕನಿಷ್ಠ ಅರ್ಹತೆ ಸ್ನಾತಕೋತ್ತರ ಪದವಿಯಾಗಿದ್ದು, ಪಿಜಿ. ಡಿಪ್ಲೊಮಾ ಎಂ.ಫಿಲ್, ಪಿಎಚ್‍ಡಿ ಅಥವಾ ಡಾಕ್ಟರೇಟ್ ಪದವಿ ಆನಂತರದ ವಿದ್ಯಾರ್ಹತೆಗಳನ್ನು ಹೊಂದಿದವರಿಗೆ ಅಥವಾ ವೃತ್ತಿಪರ ವಿದ್ಯಾರ್ಹತೆಗಳಾದ ಎಲ್‍ಎಲ್‍ಬಿ, ಎಂಬಿಎ, ಬಿ.ಟೆಕ್, ಸಿ.ಎ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ. ಎಲ್ಲಾ ಬೋಧಕ ವರ್ಗದವರು ತರಬೇತಿ ಅಥವಾ ಸಂಶೋಧನೆ ಅಥವಾ ಪ್ರಕಾಶನ ಅಥವಾ ಯೋಜನಾ ನಿರ್ವಹಣೆಯ ಸಿದ್ಧ ದಾಖಲೆಯಲ್ಲಿ ಅನುಭವ ಹೊಂದಿದ್ದಾರೆ.

ಇತ್ತೀಚಿನ ನವೀಕರಣ​ : 31-05-2022 04:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080