ಅಭಿಪ್ರಾಯ / ಸಲಹೆಗಳು

ಗ್ರಂಥಾಲಯದ ಕುರಿತ ಮಾಹಿತಿ

ಗ್ರಂಥಾಲಯದ ಕುರಿತು ಮಾಹಿತಿ

 

ಸಂಕ್ಷಿಪ್ತ ಪರಿಚಯ

 

ವಿತ್ತೀಯ ಕಾರ್ಯನೀತಿ ಸಂಸ್ಥೆ (ವಿಕಾಸಂ)ಯು ಸುಸಜ್ಜಿತ ಗ್ರಂಥಾಲಯವನ್ನು ಹೊಂದಿದೆ. ಗ್ರಂಥಾಲಯವು ಪರಿಣಿತ ಸಿಬ್ಬಂದಿಯನ್ನು ಹೊಂದಿದ್ದು, ಇದು ಓದುಗರ ಜ್ಞಾನವನ್ನು ವೃದ್ಧಿಸಲು ವಿಶಾಲ ಶ್ರೇಣಿಯ ಶೈಕ್ಷಣಿಕ ಸಂಪನ್ಮೂಲಗಳಾದ ಪುಸ್ತಕಗಳು, ನಿಯತಕಾಲಿಕೆಗಳು, ಆನ್ಲೈನ್ ನಿಯತಕಾಲಿಕೆಗಳು, ದತ್ತಾಂಶ ಸಂಚಯಗಳು, ಹಳೆಯ ಸಂಪುಟಗಳು, ವರದಿಗಳು, ಸಿಡಿ/ಡಿವಿಡಿಗಳು ಮತ್ತು ಆಡಿಯೋ/ವಿಡಿಯೋ ಸಿ.ಡಿ ಗಳನ್ನು ಹೊಂದಿದೆ. ತನ್ನ ಓದುಗರ ಮಾಹಿತಿಯ ಅಗತ್ಯಗಳನ್ನು ಪೂರೈಸುವ ಸಲುವಾಗಿ ಸಮಗ್ರ ಸಾಹಿತ್ಯದ ಸಂಗ್ರಹವನ್ನು ಪ್ರಧಾನವಾಗಿ ತೆರಿಗೆ, ಸಾರ್ವಜನಿಕ ವೆಚ್ಚ ನಿರ್ವಹಣೆ, ಹೂಡಿಕೆ ಮೌಲ್ಯ ಮಾಪನ, ಸಾರ್ವಜನಿಕ ಸಾಲ ಮತ್ತು ಸರ್ಕಾರದ ಲೆಕ್ಕ ಪತ್ರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದೆ.

 

ಅನುಕ್ರಮಣಿಕೆ ಮತ್ತು ವರ್ಗೀಕರಣ

 

ದಾಖಲೆಗಳ ಸಂಸ್ಕರಣೆಗೆ ಡಿವೀ ದಶಮಾಂಶ ವರ್ಗೀಕರಣ (DDC) ವಿಧಾನವನ್ನು ಅಳವಡಿಸಲಾಗಿದೆ. ಇ-ಗ್ರಂಥಾಲಯ 4.0 ವೆಬ್ ಆದಾರಿತ ತಂತ್ರಾಂಶವನ್ನು ಬಳಸಿ ಎಲ್ಲಾ ದಾಖಲೆಗಳನ್ನು ಗಣಕೀಕೃತ ಗ್ರಂಥ ವಿವರಣಾ ಪಟ್ಟಿಯ ನಿಯಂತ್ರಣಕ್ಕೆ ತರಲಾಗಿದೆ. ಓದುಗರಿಗಾಗಿ ಆನ್ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್ನ್ನು (OPAC) ಒದಗಿಸಲಾಗಿದೆ. ಇದರ ಸಹಾಯದಿಂದ ಲೇಖಕರು, ಶೀರ್ಷಿಕೆ, ವಿಷಯ, ವರ್ಗಸಂಖ್ಯೆ, ಪ್ರಕಾಶಕರು ಅಥವಾ ಶೀರ್ಷಿಕೆಯಲ್ಲಿನ ಪದಗಳ ಮೂಲಕ ಹುಡುಕಬಹುದು. ಹೊಸದಾಗಿ ಸೇರ್ಪಡೆಯಾದ ಪುಸ್ತಕ ಮತ್ತು ಪತ್ರಿಕೆಗಳನ್ನು ವಾರಕ್ಕೊಮ್ಮೆ ಪ್ರದರ್ಶಿಸಲಾಗುತ್ತದೆ. ಪುಸ್ತಕ ಪ್ರದರ್ಶನದ ದಿನಾಂಕ ಮುಗಿದ ಬಳಿಕ ಎರವಲು ಪಡೆಯಬಹುದು. 

 

ಗ್ರಂಥಾಲಯದ ವೇಳೆ:

ಗ್ರಂಥಾಲಯದ ಸಮಯ      : ಬೆಳಿಗ್ಗೆ 10.00 ರಿಂದ ಸಂಜೆ 05.30 ರವರೆಗೆ

ತರಬೇತಿ ದಿನಗಳಲ್ಲಿ          : ಬೆಳಿಗ್ಗೆ 09.00 ರಿಂದ ಸಂಜೆ 07.00 ರವರೆಗೆ

  

 

ಎರವಲು ಪಡೆಯುವ ಸೌಲಭ್ಯ

 

 ಸದಸ್ಯರಿಗೆ ಗ್ರಂಥಾಲಯ ಕಾರ್ಡ್ ಆಧಾರದ ಮೇಲೆ ಗ್ರಂಥಾಲಯದಿಂದ ಪುಸ್ತಕಗಳನ್ನು ನೀಡಲಾಗುವುದು.

  • ಗ್ರಂಥಾಲಯದಿಂದ ಪಡೆದ ಕಾರ್ಡ್ ವರ್ಗಾಯಿಸುವಂತಿಲ್ಲ.
  • ಪುಸ್ತಕಗಳನ್ನು ಎರವಲು ಪಡೆಯುವ ಸಮಯದಲ್ಲಿ ಪುಸ್ತಕಗಳು ಯಾವುದೇ ದೋಷ / ಹಾನಿಗೊಳಗಾಗಿಲ್ಲವೆಂಬುದನ್ನು ಖಾತ್ರಿ ಮಾಡಿಕೊಳ್ಳುವುದು. ಹಿಂದಿರುಗಿಸುವ ಸಮಯದಲ್ಲಿ ಯಾವುದೇ ದೋಷ/ಹಾನಿಗೆ ತಾವೇ ಜವಾಬ್ದಾರರು.
  • ಗ್ರಂಥಾಲಯದಿಂದ ಪಡೆದ ಕಾರ್ಡ್ ನೀಡಿ ಪುಸ್ತಕಗಳನ್ನು ಎರವಲು ಪಡೆಯಬೇಕು. ನೀಡದಿದ್ದ ಪಕ್ಷದಲ್ಲಿ ಗ್ರಂಥಾಲಯದ ಸಿಬ್ಬಂದಿ ಪುಸ್ತಕಗಳನ್ನು ನೀಡಲು ನಿರಾಕರಿಸಬಹುದು.
  • ಸದಸ್ಯರು ಪಡೆದುಕೊಂಡ ಗ್ರಂಥಾಲಯದ ಕಾರ್ಡಿನ ವಾಯಿದೆಯನ್ನು ನಮೂದಿಸಲಾಗಿರುತ್ತದೆ.
  • ಸಂಸ್ಥೆಯಿಂದ ಬಿಡುಗಡೆ ಗೊಳಿಸುವುದಕ್ಕೂಮೊದಲು ಎಲ್ಲಾ ಸದಸ್ಯರು ಗ್ರಂಥಾಲಯದಿಂದ “ಬಾಕಿ ಉಳಿದಿಲ್ಲ" ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು.
  • ದೀರ್ಘಕಾಲದ ರಜೆಗೆ ತೆರಳುವ ಮುನ್ನ ಎಲ್ಲಾ ಸದಸ್ಯರು ಗ್ರಂಥಾಲಯದಿಂದ ಎರವಲು ಪಡೆದ ಪುಸ್ತಕಗಳನ್ನು ಹಿಂತಿರುಗಿಸಿ “ಬಾಕಿ ಉಳಿದಿಲ್ಲ” ಎಂಬ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬೇಕು.
  • ಗ್ರಂಥಾಲಯದ ಸಂಪನ್ಮೂಲಗಳು - ಪರಾಮರ್ಶನಕ್ಕೆ ಮತ್ತು ಸಂಸ್ಥೆಯ ಉಪಯೋಗಕ್ಕೆ:    
  • ಶಬ್ದಾರ್ಥಕೋಶಗಳು
  • ವಿಶ್ವಕೋಶಗಳು
  • ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು
  • ದಿನ ಪತ್ರಿಕೆಗಳು
  • ಪ್ರಬಂಧ ಮತ್ತು ಪ್ರೌಢ ಪ್ರಬಂಧಗಳು
  • ಸಿಡಿ / ಡಿವಿಡಿ
  • ಸಂಪುಟಗಳು
  • ಕೈಪಿಡಿಗಳು
  • ಆಯವ್ಯಯ ದಸ್ತಾವೇಜುಗಳು

 

ಅಂರ್ತಜಾಲ ಸಂಪರ್ಕದ ಸೌಲಭ್ಯ

 

  • ಗ್ರಂಥಾಲಯದ ನೋಂದಾಯಿತ ಬಳಕೆದಾರರಿಗೆ ಮಾತ್ರ ಅಂರ್ತಜಾಲ ಸೌಲಭ್ಯವಿದೆ.
  • ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳ ಉದ್ದೇಶಗಳಿಗಾಗಿ ಮಾತ್ರವೇ ಬಳಕೆದಾರರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು ನೀಡಲಾಗುತ್ತದೆ.
  • ಅಂರ್ತಜಾಲ ವ್ಯವಸ್ಥೆಯು ದುರ್ಬಳಕೆಯಾಗುತ್ತಿರುವುದು ಕಂಡುಬಂದಲ್ಲಿ ಗ್ರಂಥಪಾಲಕರ ಗಮನಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ.
  • ಅಂರ್ತಜಾಲ ವ್ಯವಸ್ಥೆಯು ದುರ್ಬಳಕೆ ಮಾಡಿಕೊಂಡ ವ್ಯಕ್ತಿಗೆ ವಿತ್ತೀಯ ಕಾರ್ಯನೀತಿ ಸಂಸ್ಥೆಯ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಂಡು, ಸೌಲಭ್ಯವನ್ನು ಆ ವ್ಯಕ್ತಿಗೆ ತಡೆಹಿಡಿಯುವ ಹಕ್ಕನ್ನು ಗ್ರಂಥಪಾಲಕರಿಗೆ ಕಾಯ್ದಿರಿಸಲಾಗಿದೆ.
  • ಬಳಕೆದಾರರು ತಮ್ಮ ವೈಯಕ್ತಿಕ ವಿವರಗಳನ್ನು ದಾಖಲು ಪುಸ್ತಕದಲ್ಲಿ ಬಳಕೆಯ ಮೊದಲು ಮತ್ತು ನಂತರ ತಪ್ಪದೇ ನಮೂದಿಸುವುದು.
  • ವಿಶೇಷ ಪ್ರವೇಶ ವ್ಯವಸ್ಥೆಯ ಮೂಲಕ ಡಿಜಿಟೆಲ್ ವಿಭಾಗದಲ್ಲಿ ಇ-ನಿಯತಕಾಲಿಕೆಗಳು ಮತ್ತು ಇ-ಪುಸ್ತಕಗಳ ಉಪಯೋಗವನ್ನು ಪಡೆಯಬಹುದು. (ಬ್ರಿಟೀಷ್  ಕೌನ್ಸಿಲ್ ಸದಸ್ಯತ್ವದಲ್ಲಿ ಮಾತ್ರ ಲಭ್ಯ) 
  • ಬ್ರಿಟೀಷ್ ಕೌನ್ಸಿಲ್ ಗ್ರಂಥಾಲಯದ ಸದಸ್ಯತ್ವ  ಸೌಲಭ್ಯವನ್ನು ಬೋಧಕರು / ಅಧಿಕಾರಿಗಳು ಬಳಸಿಕೊಳ್ಳಬಹುದು.
  • ಗ್ರಂಥಾಲಯದ ಪುಸ್ತಕಗಳನ್ನು ಹುಡುಕಲು OPAC ವ್ಯವಸ್ಥೆಯು ಲಭ್ಯವಿರುತ್ತದೆ.

 

ಸಾಮಾನ್ಯ ನಿಯಮಗಳು

 

  • ಗ್ರಂಥಾಲಯದಲ್ಲಿ ಸದಸ್ಯರು ನಿಶ್ಯಬ್ದತೆಯನ್ನು ಕಾಪಾಡಬೇಕು, ಅಗತ್ಯವಿದ್ದಲ್ಲಿ ಮೆಲುದ್ವನಿಯಲ್ಲಿ ಮಾತನಾಡುವುದು.
  • ಪ್ರವೇಶ ನೋಂದಣಿ ಪುಸ್ತಕದಲ್ಲಿ ನೋಂದಣಿ ಮಾಡುವುದು.
  • ಗ್ರಂಥಾಲಯದ ಒಳಗೆ ಮೊಬೈಲ್ ಫೋನ್‌ಗಳನ್ನು ವೈಬ್ರೇಟ್ ಮೋಡ್‍ನಲ್ಲಿ ಬಳಸುವುದು.
  • ಸದಸ್ಯರು ಗ್ರಂಥಾಲಯಕ್ಕೆ ಸೇರಿದ ಯಾವುದೇ ಪುಸ್ತಕಗಳ ಮೇಲೆ ಬರೆಯುವುದು, ಹಾನಿ ಮಾಡುವುದು ಅಥವಾ ಗುರುತು ಹಾಕುವುದನ್ನು ಖಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ.
  • ಸದಸ್ಯರು ಪುಸ್ತಕಗಳು ಮತ್ತು ನಿಯತಕಾಲಿಕೆಗಳನ್ನು ಉಪಯೋಗಿಸಿದ ನಂತರ ಮೇಜಿನ ಮೇಲೇ ಇಡುವುದು.
  • ಎರವಲು ಪಡೆದ ಸದಸ್ಯರಿಂದ ಪುಸ್ತಕವು ಕಳೆದು ಹೋದ ಪಕ್ಷದಲ್ಲಿ ತಕ್ಷಣವೇ ಗ್ರಂಥಾಲಯಕ್ಕೆ  ವರದಿ ಮಾಡಬೇಕು. ನಂತರ ಅದೇ ಪುಸ್ತಕವನ್ನು 07 ದಿನಗಳೊಳಗಾಗಿ ನೀಡಬೇಕು ಇಲ್ಲವೇ ಪುಸ್ತಕ ಮುದ್ರಣದಲ್ಲಿದ್ದರೆ ಅದರ ಸದ್ಯದ 2ರಷ್ಟು ದರವನ್ನು ನೀಡಬೇಕು, ಪುಸ್ತಕ ಮುದ್ರಣದಲ್ಲಿಲ್ಲದ ಪಕ್ಷದಲ್ಲಿ ಅದರ ಮುದ್ರಿತ ದರದ ಮೂರು ಪಟ್ಟನ್ನು ನೀಡಬೇಕು.
  • ಗ್ರಂಥಾಲಯದಿಂದ ಬಹು ಸಂಪುಟಗಳ ಪುಸ್ತಕವನ್ನು ಎರವಲು ಪಡೆದ ಸದಸ್ಯರು ಹಾನಿಗೊಳಿಸಿದಲ್ಲಿ ಅಥವಾ ಕಳೆದು ಹಾಕಿದ್ದಲ್ಲಿ ಆ ಸಂಪುಟದ ಎಲ್ಲಾ ಪುಸ್ತಕಗಳನ್ನು 15 ದಿನಗಳೊಳಗಾಗಿ ನೀಡಬೇಕು ಇಲ್ಲವೇ ಪುಸ್ತಕ ಮುದ್ರಣದಲ್ಲಿದ್ದರೆ ಅದರ ಸದ್ಯದ 2ರಷ್ಟು ದರವನ್ನು ನೀಡಬೇಕು, ಪುಸ್ತಕ ಮುದ್ರಣದಲ್ಲಿಲ್ಲದ ಪಕ್ಷದಲ್ಲಿ ಅದರ ಮುದ್ರಿತ ದರದ ಮೂರು ಪಟ್ಟನ್ನು ನೀಡಬೇಕು.
  • ಸದಸ್ಯರುಗಳು ಪುಸ್ತಕಗಳನ್ನು ಹರಿಯುವುದು ಕಂಡುಬಂದಲ್ಲಿ ಗ್ರಂಥಾಲಯದ ಸೌಲಭ್ಯಗಳನ್ನು ಬಳಸದಂತೆ ವಿತ್ತೀಯ ಕಾರ್ಯನೀತಿ ಸಂಸ್ಥೆಯು ಶಿಸ್ತುಕ್ರಮಗಳನ್ನು ಕೈಗೊಳ್ಳುವುದು. 
  • ಸದಸ್ಯರುಗಳು ತಮ್ಮ ವೈಯುಕ್ತಿಕ ವಸ್ತುಗಳನ್ನು ಪ್ರಾಪರ್ಟಿ ಕೌಂಟರ್‍ನಲ್ಲಿ ಇಡುವುದು.

  

ನಿಯಮಗಳು ಮತ್ತು ನಿಬಂಧನೆಗಳು

 

  • ಬೋಧಕರು, ಸಂಶೋಧನಾ ಅಭ್ಯರ್ಥಿಗಳು, ತರಬೇತಿ ಪಡೆಯುವ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳು ಮತ್ತು ಸಂಸ್ಥೆಯ ಬೋಧಕೇತರ ಸಿಬ್ಬಂದಿಯ ಅನುಕೂಲಕ್ಕಾಗಿ ಗ್ರಂಥಾಲಯವನ್ನು ಪ್ರಮುಖವಾಗಿ ಬಳಸಲಾಗುತ್ತದೆ.
  • ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಗ್ರಂಥಾಲಯದಿಂದ ಪುಸ್ತಕಗಳನ್ನು ಎರವಲು ಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ. ಕೆಲಸದ ಅವಧಿಯಲ್ಲಿ ಸಂದರ್ಶಕರಿಗೆ ಪರಾಮರ್ಶನ ವಿಭಾಗವು ತೆರೆದಿರುತ್ತದೆ
  • ಸರ್ಕಾರದ ಇಲಾಖೆಗಳು ಅಥವಾ ಸಂಶೋಧನಾ ಅಭ್ಯರ್ಥಿಗಳ ವಿಶೇಷ ಕೋರಿಕೆಯ ಮೇರೆಗೆ ಇಲಾಖೆಯ ಸಕ್ಷಮ ಪ್ರಾಧಿಕಾರವು ಅಲ್ಲಾವಧಿಗೆ ಪುಸ್ತಕಗಳನ್ನು ಎರವಲು ಪಡೆಯಲು ಅನುಮತಿಯನ್ನು ವಿಸ್ತರಿಸಿದೆ.

 

ಇತ್ತೀಚಿನ ನವೀಕರಣ​ : 22-04-2022 03:48 PM ಅನುಮೋದಕರು: Admin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಿತ್ತೀಯ ಕಾರ್ಯ ನೀತಿ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080